Tuesday, February 26, 2008

ಗೋವ..

ಯಾಕಿಷ್ಟೊಂದು ವಿದೇಶಿಯರು
ಬರುತ್ತಾರೆ ಗೋವೆಗೆ..?
ಸಮುದ್ರ ದೇವರ
ಅರೆ ಬೆತ್ತಲೆ ಸೇವೆಗೆ..!

ವ್ಯತಾ್ಯಸ

ಭಾರತದಲಾ್ಲದರೆ ಕೇಳಾ್ತರೆ
ಮದುವೆಯ ಎಷ್ಟನೆ ವಷ೯ ?
ಅಮೆರಿಕಾದಲಾ್ಲದರೆ ಕೇಳಾ್ತರೆ
ವಷ೯ದ ಎಷ್ಟನೆ ಮದುವೆ ?
--------------

Friday, February 22, 2008

ಆಕೆ..

ಮೊದಲ ಚುಂಬನಕ್ಕೆ
ನಾಚಿ ನೀರಾದಳು..
ಎರಡನೆಯ ಚುಂಬನಕ್ಕೆ
ಪ್ರವಹಿಸುವ ಗಂಗೆಯಾದಳು..
ಮೂರನೆಯ ಚುಂಬನದ ಹೊತ್ತಿಗೆ
ಮಲಿನೆಯಾಗಿದ್ದಳು..!
----------

ಭರತ ಗರಡಿಯವರು..

ಗಡಿಯೆ ಗುಡಿಯು
ನಾಡೆಮಗೆ ನಿಧಿಯು
ಅಡಿಗಡಿಗೆ ಸಿಡಿವ
ಗುಂಡುಗಳಿಗೆ ಗಂಡಾಗಿ
ಗುಂಡಿಗೆಯೊಡ್ಡಿ ನಿಲ್ಲುವವರು..
ನಾವು ಭರತ ಗರಡಿಯವರು ||
ಹೆಜ್ಜೆ ಹಿಂದಿಡದೆ
ಕಜ್ಜ ಬದಿಗಿಡದೆ
ಸಜ್ಜಾಗಿ ನುಗ್ಗಿ ಬಂದವರ
ಇಚ್ಚೆಗೆ ನೆಲೆಕೊಡದೆ
ಕೊಚ್ಚಿ ಕೊಲ್ಲುವವರು..
ನಾವು ಭರತ ಗರಡಿಯವರು ||

ಚಳಿ,ಮಳೆ, ಬಿರುಗಾಳಿಗಂಜದೆ
ನಾಳೆ ಬಂದರೂ ಸಾವಿಗಂಜದೆ
ಖೂಳ ಖಳರ ತುಪಾಕಿಗಂಜದೆ
ದಾಳಿಯಿಟ್ಟರೆ ದಯೆಯ ತೋರದೆ
ರಕ್ತದೋಕುಳಿ ಹರಿಸುವವರು...
ನಾವು ಭರತ ಗರಡಿಯವರು ||

ನಿದ್ದೆ,ಮುದ್ದೆಯ ಪರಿವೆಯಿಲ್ಲದೆ
ಬಂಧು-ಬಾಂಧವರ ಕರೆಗೆ ಕರಗದೆ
ಇಂದು,ನಾಳೆಯ ತೂಗಿ ನೋಡದೆ
ನೊಂದ ದಿನಗಳ ಮತ್ತೆ ನೆನೆಯದೆ
ದೇಶ ಸೇವೆಗೆ ಕಟಿಬದ್ಧರಾದವರು...
ನಾವು ಭರತ ಗರಡಿಯವರು ||

ಭಂಡ ಧೈರ್ಯದಿ ಬಂದು
ಮೊಂಡುತನದಲಿ ಮುನ್ನುಗ್ಗೊ,
ಶಂಡರೆದೆ ಗುಂಡಿಗೆಯ ಭಂಗಿಸುವ
ಎಂಟೆದೆಯ ಗಂಡು ಪಡೆಯವರು...
ನಾವು ಭರತ ಗರಡಿಯವರು ||
---------------

ನನ್ನಾಕೆ..

ನನ್ನಾಕೆಯ ನುಡಿ ನೇರ
ನಡೆ ಸರಳ,ಮನಸಂತೂ
ಹಾಲಷ್ಟೇ ಬೆಳ್ಳಗೆ..
ಬಣ್ಣ ತುಸು ಕಪ್ಪಾದರೂ
ಅಪ್ಪಟ ಚಿನ್ನ
ನನ್ನ ಮಟ್ಟಿಗೆ..

ನಕ್ಕಿದ್ದು...

ನನಗಿನ್ನೂ ಸರಿಯಾಗಿ
ನೆನಪಿದೆ..
ಮದುವೆಯ ಮುನ್ನಾ ದಿನ
ನಾನು ಕೊನೆಯ ಸಲ
ನಕ್ಕಿದ್ದೆ.!

Wednesday, February 20, 2008

ಮಂತ್ರಿಯಾದ ಮೇಲೆ...

ಅವರು ಮಂತ್ರಿಯಾದ ಮೇಲೆ
ಆಗಿದೆ ಅಷ್ಟೊಂದು ಏಳಿಗೆ...
ಸ್ವಂತಕ್ಕಾಗಿ ಕಟ್ಟಿಸಿದ್ಹಾರೆ
ಮಾಳಿಗೆ ಮೇಲೆ ಮಾಳಿಗೆ !!
-------

ವಿಪರ್ಯಾಸ...

ಏರಿದಂತೆ ಆಕೆಯ
ನಟನೆಗೆ ದರ
ಬಂದಿದೆ ಆಕೆಗೆ
ಬಟ್ಟೆಗೆ ಬರ...!
-----

ಸಂಭವಾಮಿ ಕಲಿಯುಗೇ...?

ಒಂದೇ ತಾಯ ಕುಡಿಗಳೆಲ್ಲ ಹಸಿದಹೆಬು್ಬಲಿಯಂತೆ
ನರಮೇಧಕಣಿಯಾಗಿ ನಿಂತಿರುವ ದೃಶ್ಯ !
ಭಾರತ,ಅಮೇರಿಕಾ,ಶೀಲಂಕಾವೆಂದೇನೂ ಇಲ್ಲ
ಕೊಚಿ್ಚ-ಕೊಲ್ಲುವುದೆಂದರೆ ಇವರಿಗದೆಷು್ಟ ಹರ್ಷ ?
ಕೋವಿ,ಬಂದೂಕದ ದಟ್ಟ ಹೊಗೆಯಿಂದ
ಕಪಿ್ಪಟು್ಟ ಗೋಳಿಡುತಿದೆ ನೀಲಾಕಾಶ..
ಯಾವ ಕ್ಷಣದಲೂ್ಲ ಧರೆಗಿಳಿಯಬಹುದು
ಗುಂಡು-ಸಿಡಿಗುಂಡುಗಳ ರುಧಿರ ವರ್ಷ ||
ರುಂಡ ಚೆಂಡಾಡುವ ಘೋರ ಮಾರಣಕೆ
ಮುಗ್ದರ,ಮಹಿಳೆಯರ ಬಲಿ ಕೊಟ್ಟವರು..
ಜಾತಿ,ಮತ,ಧಮ೯ದ ವಿಷವರ್ತುಲದೊಳಗೆ
ಮಾನವೀಯತೆಯ ಅಪಹರಿಸಿ ಬಂಧಿಸಿಟಿ್ಟಹರು.
ಏಸು,ಬುದ್ದರು ಜನ್ಮವೆತಿ್ತದ ಶಾಂತಿ ನೆಲದಲೆ್ಲ
ನೆತ್ತರಲಿ್ಲ ಬರೆಯಲ್ಪಟಿ್ಟದೆ ನಮೆ್ಮಲ್ಲರ ಹೆಸರು..
ನರಮಾಂಸದ ರುಚಿಕಂಡ ನರರಾಕ್ಷಸರಿರುವಾಗ
ಜೀವಾಧಾರವಾದ ಭೂತಳದಿ ಯಾರು ಸುರಕ್ಷಿತರು ? ||
ಅರಿವಾಗದಾ್ಯಕಿವರಿಗೆ ಬಾ೦ಬು, ಗು೦ಡುಗಳಿ೦ದ
ಬದಲಿಸಲಾಗದು ಜಗದ ಹಣೆಯ ಬರಹ
ಪರಿಹಾರವೇ ಇಲ್ಲವೇ ನಮ್ಮ ಸಮಸೆ್ಯಗಳಿಗೆ
ಬೇರೆ ಮಾರ್ಗದಿ ರಕ್ತಕಾ್ರ೦ತಿಯ ವಿನಹ?
ಮುನಿಸಿಕೊ೦ಡವರ ಮನದೊಳಗೆ ಹೊಕ್ಕು
ಭೇದಿಸಬೇಕಿದೆ ಧರ್ಮಾ೦ಧಕಾರದ ಚಕ್ರವೂ್ಯಹ
ಶಾ೦ತಿ, ಸಹನೆ ತು೦ಬಿದ ಸಿಹಿ ಜಲದೊಸರ ಹ೦ಚಿ
ತಣಿಸಬೇಕಿದೆ ಬ೦ದೂಕ ಹಿಡಿದವರ ರಕ್ತ ದಾಹ.
ಭುವಿಗೆ ಬ೦ದಾಗ ಏನನೂ್ನ ಹೊತ್ತು ತ೦ದವರಿಲ್ಲ
ಮತಾ್ಯಕೆ ನಮ್ಮದೇ ನೆಲ-ಜಲವೆ೦ಬ ಹುಚ್ಚು ವ್ಯಾಮೋಹ
ಬ೦ದೂಕ ಬದಿಗಿರಿಸಿ ಬನ್ನಿ ಮಾನವತೆಯ ಸನಿಹ
ಬದಲಿಸಲಾಗದ್ದನೂ್ನ ಬದಲಿಸಬಲು್ಲದು ಪ್ರೀತಿ-ಸ್ನೇಹ ||

ಮರೆಯಲಾಗದ ಒಲವಿಗಾಗಿ...

೧. ಕೇಳಿಸಿತೆ ಗೆಳತಿ...?
ಎಲ್ಲಾ ಮರೆತ ಮೇಲೂ
ಮನದ ಮೂಲೆಯಲೆಲ್ಲೊ
ಅವಿತಿದ್ಹು ಕಾಡುತಿದೆ
ಹಳೆಯ ನೆನಪು...
ಒಲವ ಚಿತ್ರಗಳೆಲ್ಲಾ
ಸುಟ್ಟು ಕರಕಲಾದ ಮೇಲೂ
ಕಾಣಿಸಿದೆ ಮತ್ತೆ ಮತ್ತೆ
ನಿನ್ನ......... ರೂಪು !!!
---------
೨. ಅಂತರಂಗದಿಂದ...
ಅನಂತ ಕೋಟಿ ಭಾವ ನಕ್ಷತ್ರಗಳು
ಮಿನುಗುತಿ್ತವೆ ನನ್ನಂತರಂಗದ ತುಂಬ..
ಆದರೂ ಬಾಳೆಲಾ್ಲ ಅಮವಾಸೆ್ಯ
ಇಲ್ಲದೆ ನಿನ್ನ ಚಂದ್ರಬಿಂಬ..!!!
----------

ಮಾನಸ ಯಾತೆ್ರಯ ಮೆಾದಲ ಹೆಜೆ್ಜಗಳೆೊಂದಿಗೆ....

ಇದು ಭಕಿ್ತಯ ಅಭಿವ್ಯಕಿ್ತಗಾಗಿನ ಯಾತೆ್ರಯಲ್ಲ...
ಮಾನಸಿಕ ಹೊಯಾ್ದಟದ ಅಭಿವ್ಯಕಿ್ತಯ ಯಾತೆ್ರ..!!
ಇದು ಪುಣ್ಯ ಸಂಚಯದ ಕಠಿಣ ಯಾತೆ್ರಯಲ್ಲ...
ಪೀ್ರತಿ ಸಂಚಯದ ಮಧುರ ಯಾತೆ್ರ..!!
ಇದು ಜೀವನ ಮುಕಿ್ತ ಮಾರ್ಗದ ಯಾತೆ್ರಯಲ್ಲ...
ಹಿಡಿದಿಟ್ಟ ಭಾವನೆಗಳ ಸ್ವಚ್ಚಂದ ಮುಕಿ್ತ ಯಾತೆ್ರ..!!

---------------------------