« Home | ಭ್ರಮೆಯ ನೆಚ್ಚಿ... » | ಅಂತರ್ಮುಖಿಯಾಗು... » | ಗೋವ.. » | ವ್ಯತಾ್ಯಸ » | ಆಕೆ.. » | ಭರತ ಗರಡಿಯವರು.. » | ನನ್ನಾಕೆ.. » | ನಕ್ಕಿದ್ದು... » | ಮಂತ್ರಿಯಾದ ಮೇಲೆ... » | ವಿಪರ್ಯಾಸ... »

ಗೆದ್ದು ಸೋತವನು..

ಅದೆಷ್ಟು ಗೌರವವಿತ್ತು ನಿನ್ನ ಮೇಲೆ
ಬಾಲಕನಾಗಿದ್ದರೂ ಒಂದಿಷ್ಟೂ ಭಯಪಡದೆ
ತಾಟಕಿಯಾದಿಯಾಗಿ ರಕ್ಕಸರ ಹುಟ್ಟಡಗಿಸಿದಾಗ...
ಶಾಪಗ್ರಸ್ತ ಮುನಿಸತಿಗೆ ಜೀವ ತಂದಾಗ...
ಬಿಲ್ಲು ಮುರಿದು ಮನದೊಡತಿಯ ಗೆದ್ದು ತಂದಾಗ...
ಪಿತೃವಾಕ್ಯ ಪರಿಪಾಲಕನಾಗಿ ಅಡವಿಗಭಿಮುಖನಾದಾಗ...||
ನಿಜವಾಗಿಯೂ ದೇವತ್ವದ ದರ್ಶನವಾಯಿತು
ಭೋಗ ಭಾಗ್ಯಗಳ ತೊರೆದು, ಬರಿಗಾಲಲ್ಲೇ ನಡೆದು
ಪರ್ಣ ಕುಟೀರದೊಳಗೂ ಪರಮಾನಂದದೊಳಿದ್ದಾಗಾ...
ವಿರಹದುರಿಯಲಿ ಬೆಂದು,ನೊಂದು,ಪ್ರಿಯ ಮಡದಿಗಾಗಿ
ಪ್ರೇಮ ಭೈರಾಗಿಯಾಗಿ ಪರಿ ಪರಿಯಲಿ ಪರಿತಪಿಸಿದಾಗ...
ಕಪಿ ಸೈನ್ಯ, ಸೇತು ಬಂಧನ, ಘೋರ ಕದನ ದುಷ್ಟ ಮರ್ದನ
ಇನ್ನೇನು ನೀನು ದೇವನಹುದಹುದೆಂದು ಭಕ್ತಿ ಪರವಶನಾಗಿ
ಭಾವೋನ್ಮಾದದಿ ಹುಚ್ಚೆದ್ದು ಕುಣಿಯ ಬೇಕೆಂಬಾಗ...
ಎಂಥಹಾ ಭಾವಘಾತ, ಪತಿತೆಯಾಗಿ ಕಂಡಳೆ ಪುನಿತೆ ?
ರಾಮನ ಬಾಯಿಂದ ಅಗ್ನಿಪರೀಕ್ಷೆಯ ಮಾತೆ ?
ಅಗ್ನಿಯುರಿಗಂಜದೆ ಉರಿ ಮಾತಿಗತ್ತಳು ಸೀತೆ .

ದೇವತ್ವವೆಲ್ಲಿ ರಾಮ, ಬರಿ ಮನುಷ್ಯತ್ವವೂ ಇರದ
ಎಲ್ಲರಂತೆ ಸಾಮಾನ್ಯ ಗಂಡಾಗಿ ನಿಂತೆ !!
ಸೀತೆ ಗೆದ್ದಳು, ಪುರುಷ ಸಮಾಜ ಗೆದ್ದಿತು
ಆದರೆ ರಾಮ ನೀನು... ಗೆದ್ದು ಸೋತೆ ||