« Home | ಕಾರಣ..!?! » | ರಹಸ್ಯ... » | ಕೊಡುಗೆ... » | ಗೆದ್ದು ಸೋತವನು.. » | ಭ್ರಮೆಯ ನೆಚ್ಚಿ... » | ಅಂತರ್ಮುಖಿಯಾಗು... » | ಗೋವ.. » | ವ್ಯತಾ್ಯಸ » | ಆಕೆ.. » | ಭರತ ಗರಡಿಯವರು.. »

ನಾನಾಗಬೇಕೊಮ್ಮೆ ಮಂತ್ರಿ...

ನಾನಾಗಬೇಕೊಮ್ಮೆ ಮಂತ್ರಿ...
-------------------

ಬೀಸಿದೆ ಮತ್ತೊಮ್ಮೆ
ಚುನಾವಣೆಯ ಗಾಳಿ
ಗರಿಗೆದರಿದೆ ಕುರ್ಚಿಯ ಕನಸು
ಹೊಸ ರೂಪವ ತಾಳಿ ||

ಜನರಿದ್ದೆಡೆ ಸಾಗುವೆನು
ಮುಖವಾಡವ ಧರಿಸಿ
ಮತಯಾಚನೆ ಮಾಡುವೆನು
ಹುಸಿ ನಗೆಯ ಸೂಸಿ ||

ಮತದಾರರ ಮರೆವೆಂಬುದು
ರಾಜಕಾರಣಿಕೆ ವರವು
ಮನವೊಲಿಕೆಗೆ ಬಳಸುವೆ
ಆಶ್ವಾಸನೆಯ ನೆರವು ||

ಮೌಲ್ಯಗಳು,ತತ್ವಗಳು
ನನಗ್ಯಾಕೆ ಬೇಕು
ಹಣ ಬಲ, ಜಾತಿ ಬಲ
ಗೆಲ್ಲುವುದಕ್ಕೆ ಸಾಕು ||

ಬೆನ್ನ ಹಿಂದಿದ್ದರೇನಾಯ್ತು
ಹಗರಣದ ಕರಿ ನೆರಳು
ಪಕ್ಷಾಂತರದ ಪರಕಾಯವಿದೆ
ಪಡೆಯಲು ಹೊಸ ಬಾಳು ||

ಜನರೇನೇ ಬೈದರೂ
ಇದ್ದು ಬಿಡುವೆನು ಸುಮ್ಮನೆ
ಟೊಮೆಟೊ,ಮೊಟ್ಟೆ ಎಸೆದರೂ
ತೋರುವೆನು ಸಹನೆ ||

ಚುನಾವಣೆ ಮುಗಿಯೊವರೆಗೆ
ನನ್ನೊಲವು ಮತದಾರರತ್ತ
ಸಮಸ್ಯೆಗಳೇನೇ ಮುಂದ್ದಿಟ್ಟರೂ
ಪರಿಹಾರದ ಅಭಯ ಹಸ್ತ ||

ಜನ ಕರೆಯಲಿ ಬಿಡಿ ನನ್ನನ್ನು
ಭ್ರಷ್ಟಚಾರಿ,ವಂಚಕ,ಕಂತ್ರಿ
ನನಗಿರುವುದೊಂದೇ ಆಸೆ
ನಾನಾಗಬೇಕೊಮ್ಮೆ ಮಂತ್ರಿ ||