ಭರತ ಗರಡಿಯವರು..
ಗಡಿಯೆ ಗುಡಿಯು
ನಾಡೆಮಗೆ ನಿಧಿಯು
ಅಡಿಗಡಿಗೆ ಸಿಡಿವ
ಗುಂಡುಗಳಿಗೆ ಗಂಡಾಗಿ
ಗುಂಡಿಗೆಯೊಡ್ಡಿ ನಿಲ್ಲುವವರು..
ನಾವು ಭರತ ಗರಡಿಯವರು ||
ಹೆಜ್ಜೆ ಹಿಂದಿಡದೆ
ಕಜ್ಜ ಬದಿಗಿಡದೆ
ಸಜ್ಜಾಗಿ ನುಗ್ಗಿ ಬಂದವರ
ಇಚ್ಚೆಗೆ ನೆಲೆಕೊಡದೆ
ಕೊಚ್ಚಿ ಕೊಲ್ಲುವವರು..
ನಾವು ಭರತ ಗರಡಿಯವರು ||
ಚಳಿ,ಮಳೆ, ಬಿರುಗಾಳಿಗಂಜದೆ
ನಾಳೆ ಬಂದರೂ ಸಾವಿಗಂಜದೆ
ಖೂಳ ಖಳರ ತುಪಾಕಿಗಂಜದೆ
ದಾಳಿಯಿಟ್ಟರೆ ದಯೆಯ ತೋರದೆ
ರಕ್ತದೋಕುಳಿ ಹರಿಸುವವರು...
ನಾವು ಭರತ ಗರಡಿಯವರು ||
ನಿದ್ದೆ,ಮುದ್ದೆಯ ಪರಿವೆಯಿಲ್ಲದೆ
ಬಂಧು-ಬಾಂಧವರ ಕರೆಗೆ ಕರಗದೆ
ಇಂದು,ನಾಳೆಯ ತೂಗಿ ನೋಡದೆ
ನೊಂದ ದಿನಗಳ ಮತ್ತೆ ನೆನೆಯದೆ
ದೇಶ ಸೇವೆಗೆ ಕಟಿಬದ್ಧರಾದವರು...
ನಾವು ಭರತ ಗರಡಿಯವರು ||
ಭಂಡ ಧೈರ್ಯದಿ ಬಂದು
ಮೊಂಡುತನದಲಿ ಮುನ್ನುಗ್ಗೊ,
ಶಂಡರೆದೆ ಗುಂಡಿಗೆಯ ಭಂಗಿಸುವ
ಎಂಟೆದೆಯ ಗಂಡು ಪಡೆಯವರು...
ನಾವು ಭರತ ಗರಡಿಯವರು ||
---------------
ನಾಡೆಮಗೆ ನಿಧಿಯು
ಅಡಿಗಡಿಗೆ ಸಿಡಿವ
ಗುಂಡುಗಳಿಗೆ ಗಂಡಾಗಿ
ಗುಂಡಿಗೆಯೊಡ್ಡಿ ನಿಲ್ಲುವವರು..
ನಾವು ಭರತ ಗರಡಿಯವರು ||
ಹೆಜ್ಜೆ ಹಿಂದಿಡದೆ
ಕಜ್ಜ ಬದಿಗಿಡದೆ
ಸಜ್ಜಾಗಿ ನುಗ್ಗಿ ಬಂದವರ
ಇಚ್ಚೆಗೆ ನೆಲೆಕೊಡದೆ
ಕೊಚ್ಚಿ ಕೊಲ್ಲುವವರು..
ನಾವು ಭರತ ಗರಡಿಯವರು ||
ಚಳಿ,ಮಳೆ, ಬಿರುಗಾಳಿಗಂಜದೆ
ನಾಳೆ ಬಂದರೂ ಸಾವಿಗಂಜದೆ
ಖೂಳ ಖಳರ ತುಪಾಕಿಗಂಜದೆ
ದಾಳಿಯಿಟ್ಟರೆ ದಯೆಯ ತೋರದೆ
ರಕ್ತದೋಕುಳಿ ಹರಿಸುವವರು...
ನಾವು ಭರತ ಗರಡಿಯವರು ||
ನಿದ್ದೆ,ಮುದ್ದೆಯ ಪರಿವೆಯಿಲ್ಲದೆ
ಬಂಧು-ಬಾಂಧವರ ಕರೆಗೆ ಕರಗದೆ
ಇಂದು,ನಾಳೆಯ ತೂಗಿ ನೋಡದೆ
ನೊಂದ ದಿನಗಳ ಮತ್ತೆ ನೆನೆಯದೆ
ದೇಶ ಸೇವೆಗೆ ಕಟಿಬದ್ಧರಾದವರು...
ನಾವು ಭರತ ಗರಡಿಯವರು ||
ಭಂಡ ಧೈರ್ಯದಿ ಬಂದು
ಮೊಂಡುತನದಲಿ ಮುನ್ನುಗ್ಗೊ,
ಶಂಡರೆದೆ ಗುಂಡಿಗೆಯ ಭಂಗಿಸುವ
ಎಂಟೆದೆಯ ಗಂಡು ಪಡೆಯವರು...
ನಾವು ಭರತ ಗರಡಿಯವರು ||
---------------
ಅಲ್ಲಿ ಗಡಿಯೋಳು ಭರತ ಗರಡಿಯವರು ,
ಇಲ್ಲಿ ಅಡಿಯೋಳು ನಿಮ್ಮಂಥಾ ಕವಿಗಳಿರುವರು ,
ಎಲ್ಲೆಡೆ ನಮ್ಮಂಥಾ ಓದುವ ಹವ್ಯಾಸಿಗಳಿರುವರು ,
ಭರತ ಗರಡಿಯವರಿಗಾಗಿ, ಅದ್ಭುತ ಪದಗಳ ಬರೆದ ಸುಧಾಕರರಿವರು :) :)
Wonderful Kavana :) :)
Posted by
Sadanand |
August 24, 2011 at 1:41 PM